ಬ್ರಿಟನ್ನಿನ ಘ್ರಾಂಥಮ್‌ನಲ್ಲಿ 1925ರಲ್ಲಿ ಜನಿಸಿದ್ದ ಥ್ಯಾಚರ್ ಅವರ ಮೂಲ ಹೆಸರು ಮಾರ್ಗರೇಟ್ ರಾಬರ್ಟ್ಸ್. ಕನ್ಸರ್ವೇಟಿವ್ ಪಕ್ಷದ ಥ್ಯಾಚರ್ ಅವರು 1979ರಿಂದ 1990ರವರೆಗೆ ಬ್ರಿಟನ್ನಿನ ಪ್ರಧಾನಿಯಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದರು. `ಉಕ್ಕಿನ ಮಹಿಳೆ' ಎಂದೇ ಖ್ಯಾತರಾಗಿದ್ದ ಬ್ರಿಟನ್ನಿನ ಮೊದಲ ಮಹಿಳಾ ಪ್ರಧಾನಿ ಮಾರ್ಗರೇಟ್ ಥ್ಯಾಚರ್ (87) ೮ನೇ ಏಪ್ರಿಲ್ ೨೦೧೩ರಂದು ಪಾರ್ಶ್ವವಾಯುವಿನಿಂದಾಗಿ ನಿಧನರಾದರು. == ಕುಟುಂಬ == 20ನೇ ಶತಮಾನದ ಜಗತ್ತಿನ ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದ ಮಾರ್ಗರೇಟ್ ಥ್ಯಾಚರ್ ಅವರಿಗೆ ಪುತ್ರ ಮಾರ್ಕ್ ಹಾಗೂ ಪುತ್ರಿ ಕ್ಯಾರೋಲ್ ಥ್ಯಾಚರ್ ಇದ್ದಾರೆ. == ನೋಡಿ == ಥೆರೆಸಾ ಮೇ ಯುನೈಟೆಡ್ ಕಿಂಗ್‌ಡಂ == ಉಲ್ಲೇಖಗಳು ==